ದುರ್ಗದ ಸಿರಿ
ದುರ್ಗದ ಐ ಸಿರಿ (ಕಣ್ಣಿಗೆ ಸಿರಿ)
... ಮುಂದುವರೆಸಿ
ಹೂವಿನ ಮೇಲೆ ಈ ದುಂಬಿಯ ಪ್ರೀತಿ ಸಾಯುವವರೆಗೂ ಇದ್ದೇ ಇರುತ್ತೆ ಅದರಲ್ಲಿ ಸಂಶಯ ಬೇಡ, ನನ್ನದೋ ರಾಮನ ಗುಣ, ರಾವಣನ ಪಾತ್ರ. ನನ್ನೊಲವಿನ ಹೂವಿಗೆ ಪ್ರೇಮ ನಿವೇದನೆ ಮಾಡಿದ್ದೂ ನಾಗರಹಾವಿನ ಜಲೀಲನ ತರಹವೇ ಹೊರೆತು mr. ರಾಮಾಚಾರಿ ತರಹ ಅಲ್ಲ. ಅವಳೋ ಅಂದದ ಬೊಂಬೆ, ನಾನೋ ವಜ್ರಮುನಿ, ಲವ್ ಲೆಟರ್ ಸಿದ್ಧಪಡಿಸಿದ್ದು ಅವಳ ಸಹೋದರನಿಂದ ಬರೆದದ್ದು ಮಾತ್ರ ಈ ಕಾಳಿದಾಸ, ಕೊಡುವ ರೀತಿ ಮಾತ್ರ ಮಂಚದಲ್ಲಿ ಅತ್ಯಾಚಾರ ಮಾಡುವ ರೇಪಿಸ್ಟ್ ತರ, ಆಗ ಅವಳು ಲವ್ ಲೆಟರ್ ತಗೋಬೇಕಾ? ನನ್ನನ್ನು ಪ್ರೀತಿಸಬೇಕಾ? ಅವಳ ಸಂಶಯ ಅನ್ನುವುದು ನನ್ನನ್ನು ಸಮರ ಕಲೆಯ ವೀರನನ್ನಾಗಿ ಮಾಡಿಬಿಟ್ಟಿತು ನನ್ನ ಪ್ರೀತಿಗಾಗಿ .ಹೋರಾಡಿ, ಹೊಡೆದಾಡಿದ ನಾನೂ ಗಟ್ಟಿಯಾಗಿ ಒಂದು ಮಾತು ಹೇಳಲೇಬೇಕಾಯಿತು.ನೀನು ನನ್ನವಳು, ನೀನು ನನ್ನವಳೇ , ಹರಿ ಹರ ಬ್ರಹ್ಮ ಬಂದ್ರೂ ನನ್ನಿಂದ ನಿನ್ನ ದೂರ ಮಾಡೋಕೆ ಆಗೋಲ್ಲ ಅನ್ನೋ ಆ ದೊಡ್ಡ ಧನಿ ಮುಂದೆ ಪ್ರೇಮ ಅಂಕುರವಾಗಿ, ದುರ್ಗ ಎಂಬ ಚಿತ್ರದುರ್ಗದಲ್ಲಿ ಪ್ರೇಮದ ಐ ಸಿರಿಯಾಗಿ, ನನ್ನೊಲವಿನ ಬಂಗಾರದ ಹೂವಾಗಿ ಅರಳಿತು, ಹೃದಯ ಹಾಡಿತು, ಕನಸು ಚಿಗುರಿತು, ಜೋಡಿ ನಿನ್ನೇ ಪ್ರೀತಿಸುವೆ ಎಂದು ದುರ್ಗದ ಜೊತೆ ಜೊತೆಯಲ್ಲೇ ಪಯಣ ಪ್ರಾರಂಭಿಸಿತು.
Comments
Post a Comment