Posts

ದುರ್ಗದ ಸಿರಿ

 ಮುಂದುವರೆದು  ನನ್ನ ಹುಡುಗಿ ಹೆಸರು ಪುಷ್ಪ ಲತಾ, ಮನೆಯಲ್ಲಿ ಎಲ್ಲರೂ ಲತಾ ಅಂತ ಕರೆಯುತ್ತಾ ಇದ್ವಿ, ನಾನಂತೂ ಪುಕ್ಕಸಟ್ಟೆ ಹಲವಾರು ಹೆಸರು ಇಟ್ಟಿದ್ದೆ, ಅದರಲ್ಲಿ ಕೈ ಮೇಲೆ ಹಚ್ಚೆ ಹಾಕಿಸಿದ್ದು ಹೂವೇ ಎಂದು, ನಾನು ಗಣಿತದಲ್ಲಿ ವೀಕ್ ಆದ್ರೂ ಕೋಡಿಂಗ್ ಮಾಡಿ ಹೇಳುತ್ತಿದ್ದೂ ಉಂಟು 12.01.2001 ಅಂತಲೂ ಅವಳ ಪುಸ್ತಕದಲ್ಲಿ ಬರೆದಿದ್ದೆ. ಅಂದರೆ 12=L, 01=A, 20=T, 01=A, ಅಂದ್ರೆ LATA ಎಂದು, ನನ್ನವಳು ಯಾವಾಗಲೂ ಪುಸ್ತಕದ ಮೇಲೆ ಬಂಗಾರದ ಹೂವು ಅಂತ ಬರೆದುಕೊಂಡಿರುತ್ತಿದ್ದಳು.ಪ್ರೀತಿ,ಪ್ರೇಮ ಎಂದರೇ ಕ್ರಿಯಾಶೀಲತೆ ಹೊರೆತು ಕೆಟ್ಟದಲ್ಲ, ನವಿರಾದ ಪ್ರೇಮ ಕಥೆಯ ನಾಯಕ ನಾನು, ನಾಯಕಿ ನನ್ನ ಹುಡುಗಿ, ತುಮಕೂರಿನ ತುಂಟ ಹೇಗೋ ಬಸ್ ಚಾರ್ಜ್ ಹೊಂದಿಸಿ ದುರ್ಗದ ಸ್ವರ್ಗವನ್ನು ಕಣ್ತುಂಬಿಕೊಳ್ಳಲು ಬರೋದೇ ಒಂದು ಸಿರಿ,  ನನ್ನವಳು ಅದ್ಭುತ ಕಂಠಸಿರಿಯಾಕೆ ದೈವದ ಕರುಣೆಯೋ, ಭಲೇ ಭಲೇ ಚೆಂದುಳ್ಳಿ ಚೆಲುವೆ, ಓ ಪ್ರೀತಿಯೇ,ನಾ ನನ್ ಆಣೆಗೂ ಮರೆಯೋಲ್ಲ ನಿನ್ನೀ ಪ್ರೀತಿಯ ಈ ಹಾಡುಗಳು ನನ್ನಾಕೆಯ ಇಷ್ಟದ ಹಾಡುಗಳು ಮಾತಿಗಿಂತ ಈ ಹಾಡೇ ದೈನಂದಿನ ಸಂಭಾಷಣೆ ಎಂದರೂ ತಪ್ಪಾಗಲಾರದು. ತುಮಕೂರು ತುಂಟನ ನೆಂಟಸ್ಥಿಕೆಯ ಊರಲ್ಲಿ ನಮಗೆ ಯಾವುದಕ್ಕೂ ಕೊರತೆಯಿಲ್ಲ, ನಾನಂತೂ ಧಮ್ ಗಿರಾಕಿ ನನ್ನ ಹುಡುಗಿ ವಿಲ್ಸ್ ಸಿಗರೇಟ್ ತಂದು ನನ್ನ ತುಟಿ ಮೇಲೆ ಇಟ್ಟು ಕಡ್ಡಿ ತೀಡಿದರೆ, ವಿಲ್ ಪವರ್ ಗಿಂತ ವಿಲ್ಸ್ ಪವರ್ ಸಕತ್ತಾಗಿ ಇರೋದು, ನನ್ನ ಹುಡುಗಿಗೆ ಸಿಗರೇಟ್ ಸೇದ...

ದುರ್ಗದ ಸಿರಿ

 ದುರ್ಗದ ಐ ಸಿರಿ (ಕಣ್ಣಿಗೆ ಸಿರಿ) ... ಮುಂದುವರೆಸಿ ಹೂವಿನ ಮೇಲೆ ಈ ದುಂಬಿಯ ಪ್ರೀತಿ ಸಾಯುವವರೆಗೂ ಇದ್ದೇ ಇರುತ್ತೆ ಅದರಲ್ಲಿ ಸಂಶಯ ಬೇಡ, ನನ್ನದೋ ರಾಮನ ಗುಣ, ರಾವಣನ ಪಾತ್ರ. ನನ್ನೊಲವಿನ ಹೂವಿಗೆ ಪ್ರೇಮ ನಿವೇದನೆ ಮಾಡಿದ್ದೂ ನಾಗರಹಾವಿನ ಜಲೀಲನ ತರಹವೇ ಹೊರೆತು mr. ರಾಮಾಚಾರಿ ತರಹ ಅಲ್ಲ. ಅವಳೋ ಅಂದದ ಬೊಂಬೆ, ನಾನೋ ವಜ್ರಮುನಿ, ಲವ್ ಲೆಟರ್ ಸಿದ್ಧಪಡಿಸಿದ್ದು ಅವಳ ಸಹೋದರನಿಂದ ಬರೆದದ್ದು ಮಾತ್ರ ಈ ಕಾಳಿದಾಸ, ಕೊಡುವ ರೀತಿ ಮಾತ್ರ ಮಂಚದಲ್ಲಿ ಅತ್ಯಾಚಾರ ಮಾಡುವ ರೇಪಿಸ್ಟ್ ತರ, ಆಗ ಅವಳು ಲವ್ ಲೆಟರ್ ತಗೋಬೇಕಾ? ನನ್ನನ್ನು ಪ್ರೀತಿಸಬೇಕಾ? ಅವಳ ಸಂಶಯ ಅನ್ನುವುದು ನನ್ನನ್ನು ಸಮರ ಕಲೆಯ ವೀರನನ್ನಾಗಿ ಮಾಡಿಬಿಟ್ಟಿತು ನನ್ನ ಪ್ರೀತಿಗಾಗಿ .ಹೋರಾಡಿ, ಹೊಡೆದಾಡಿದ ನಾನೂ ಗಟ್ಟಿಯಾಗಿ ಒಂದು ಮಾತು ಹೇಳಲೇಬೇಕಾಯಿತು.ನೀನು ನನ್ನವಳು, ನೀನು ನನ್ನವಳೇ , ಹರಿ ಹರ ಬ್ರಹ್ಮ ಬಂದ್ರೂ ನನ್ನಿಂದ ನಿನ್ನ ದೂರ ಮಾಡೋಕೆ ಆಗೋಲ್ಲ ಅನ್ನೋ ಆ ದೊಡ್ಡ ಧನಿ ಮುಂದೆ ಪ್ರೇಮ ಅಂಕುರವಾಗಿ, ದುರ್ಗ ಎಂಬ ಚಿತ್ರದುರ್ಗದಲ್ಲಿ ಪ್ರೇಮದ ಐ ಸಿರಿಯಾಗಿ, ನನ್ನೊಲವಿನ ಬಂಗಾರದ ಹೂವಾಗಿ ಅರಳಿತು, ಹೃದಯ ಹಾಡಿತು, ಕನಸು ಚಿಗುರಿತು, ಜೋಡಿ ನಿನ್ನೇ ಪ್ರೀತಿಸುವೆ ಎಂದು ದುರ್ಗದ ಜೊತೆ ಜೊತೆಯಲ್ಲೇ ಪಯಣ ಪ್ರಾರಂಭಿಸಿತು.

ದುರ್ಗದ ಐ ಸಿರಿ